EPFO Interest Credited 2026: ದೇಶಾದ್ಯಂತ ಇರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಖಾತೆದಾರರಿಗೆ 2025-26ರ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ 8.25% ಬಡ್ಡಿಯನ್ನು ಖಾತೆಗಳಿಗೆ ಜಮೆ ಮಾಡುತ್ತಿದೆ. ಈಗಾಗಲೇ ಶೇ. 80 ರಷ್ಟು ಖಾತೆದಾರರಿಗೆ ಬಡ್ಡಿ ಹಣ ತಲುಪಿದೆ ಎಂದು EPFO ಸಂಸ್ಥೆ ತಿಳಿಸಿದೆ. ಜುಲೈ 15ರ ಒಳಗಾಗಿ ಒಟ್ಟು 34 ಕೋಟಿ ಚಂದಾದಾರರ ಖಾತೆಗಳಿಗೆ 1.44 ಲಕ್ಷ ಕೋಟಿ ರೂ. ಬಡ್ಡಿ ಹಣವನ್ನು ಜಮೆ ಮಾಡುವ ಗುರಿ ಹೊಂದಲಾಗಿದೆ.
ನಿಮ್ಮ PF ಬಡ್ಡಿ ಮತ್ತು ಬ್ಯಾಲೆನ್ಸ್ ಅನ್ನು EPFO ಪೋರ್ಟಲ್, ಉಮಾಂಗ್ ಆ್ಯಪ್ (Umang App) ಅಥವಾ ಮೊಬೈಲ್ SMS ಮೂಲಕ ಸುಲಭವಾಗಿ ಪರಿಶೀಲಿಸಬಹುದು.
PF ಬ್ಯಾಲೆನ್ಸ್ ಮತ್ತು ಬಡ್ಡಿ ವಿವರ ತಿಳಿಯಲು 3 ಸುಲಭ ವಿಧಾನಗಳು:
ಬ್ಯಾಲೆನ್ಸ್ ಪರಿಶೀಲಿಸಲು ನಿಮ್ಮ UAN (Universal Account Number) ಸಕ್ರಿಯವಾಗಿರಬೇಕು (Active ಇರಬೇಕು). ಕೆಳಗಿನ ವಿಧಾನಗಳ ಮೂಲಕ ನೀವು ವಿವರಗಳನ್ನು ಪಡೆಯಬಹುದು:
ವಿಧಾನ 1: EPFO ಪೋರ್ಟಲ್ ಮೂಲಕ
- ಮೊದಲು EPFO ಅಧಿಕೃತ ವೆಬ್‌ಸೈಟ್ https://unifiedportal-mem.epfindia.gov.in/memberinterface/ ಓಪನ್ ಮಾಡಿ.
- ಹೋಮ್ ಪೇಜ್‌ನಲ್ಲಿ ನಿಮ್ಮ UAN ನಂಬರ್, ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ನಮೂದಿಸಿ ಲಾಗಿನ್ ಆಗಿ.
- ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು ನಮೂದಿಸಿ.
- ಲಾಗಿನ್ ಆದ ನಂತರ ‘View Passbook’ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ PF ಬ್ಯಾಲೆನ್ಸ್ ಮತ್ತು ಬಡ್ಡಿ ಜಮೆಯಾಗಿರುವ ಸಂಪೂರ್ಣ ವಿವರಗಳು ಪರದೆಯ ಮೇಲೆ ಕಾಣಿಸುತ್ತವೆ.
ವಿಧಾನ 2: ಉಮಾಂಗ್ (Umang) ಆ್ಯಪ್ ಮೂಲಕ
- ನಿಮ್ಮ ಮೊಬೈಲ್‌ನ ಪ್ಲೇ ಸ್ಟೋರ್ ಅಥವಾ ಆ್ಯಪ್ ಸ್ಟೋರ್‌ನಿಂದ Umang App ಡೌನ್‌ಲೋಡ್ ಮಾಡಿಕೊಳ್ಳಿ.
- ಆ್ಯಪ್‌ನಲ್ಲಿ ಲಾಗಿನ್ ಆಗಿ, EPFO ಸೇವೆಗಳನ್ನು (EPFO Services) ಆಯ್ಕೆ ಮಾಡಿ.
- ಅಲ್ಲಿ ‘View Passbook’ ಆಪ್ಷನ್ ಕ್ಲಿಕ್ ಮಾಡುವ ಮೂಲಕ ನಿಮ್ಮ ಖಾತೆಯ ಬ್ಯಾಲೆನ್ಸ್ ಮತ್ತು ಬಡ್ಡಿಯ ವಿವರಗಳನ್ನು ಸುಲಭವಾಗಿ ವೀಕ್ಷಿಸಬಹುದು.
ವಿಧಾನ 3: SMS ಮೂಲಕ
ಇಂಟರ್ನೆಟ್ ಇಲ್ಲದಿದ್ದರೂ ಕೇವಲ ಒಂದು SMS ಕಳುಹಿಸುವ ಮೂಲಕ ನಿಮ್ಮ ಬ್ಯಾಲೆನ್ಸ್ ತಿಳಿಯಬಹುದು:
- ನಿಮ್ಮ PF ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯಿಂದ 7738299899 ಸಂಖ್ಯೆಗೆ ಮೆಸೇಜ್ ಕಳುಹಿಸಬೇಕು.
- ಮೆಸೇಜ್ ಬಾಕ್ಸ್‌ನಲ್ಲಿ ‘EPFOHO UAN’ (ಇಲ್ಲಿ UAN ಇರುವ ಜಾಗದಲ್ಲಿ ನಿಮ್ಮ 12 ಅಂಕೆಯ UAN ನಂಬರ್ ಟೈಪ್ ಮಾಡಿ) ಎಂದು ಬರೆದು ಸೆಂಡ್ ಮಾಡಿ.
- ಕೆಲವೇ ಕ್ಷಣಗಳಲ್ಲಿ ನಿಮ್ಮ ಖಾತೆಯ ಬ್ಯಾಲೆನ್ಸ್ ಮತ್ತು ಬಡ್ಡಿಯ ವಿವರಗಳು SMS ಮೂಲಕ ನಿಮಗೆ ದೊರೆಯುತ್ತವೆ.
ಸೂಚನೆ: ಸದ್ಯಕ್ಕೆ ಬಡ್ಡಿ ಜಮೆ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಒಂದು ವೇಳೆ ನಿಮ್ಮ ಖಾತೆಗೆ ಇನ್ನು ಬಡ್ಡಿ ಹಣ ಬರದಿದ್ದರೆ ಆತಂಕ ಪಡುವ ಅಗತ್ಯವಿಲ್ಲ. ಈ ತಿಂಗಳ (ಜುಲೈ) 15ರ ಒಳಗಾಗಿ ಎಲ್ಲಾ ಅರ್ಹ ಖಾತೆದಾರರ ಬ್ಯಾಂಕ್ ಖಾತೆಗಳಿಗೆ ಬಡ್ಡಿ ಹಣ ಖಂಡಿತವಾಗಿ ಜಮೆಯಾಗಲಿದೆ.