ಮೊದಲಿಗೆ, ಭಾರತೀಯ ಚುನಾವಣಾ ಆಯೋಗದ ಅಧಿಕೃತ ‘ಮತದಾರರ ಸೇವಾ ಪೋರ್ಟಲ್’ಗೆ (Voters’ Service Portal) ಭೇಟಿ ನೀಡಿ. ಸ್ಮಾರ್ಟ್ಫೋನ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಸ್ಟೋರ್ನಿಂದ ‘ECINET’ ಮೊಬೈಲ್ ಆಯಪ್ ಅನ್ನು ಸಹ ಡೌನ್ಲೋಡ್ ಮಾಡಿಕೊಂಡು ಬಳಸಬಹುದು.
ಪೋರ್ಟಲ್ ಅಥವಾ ಆಯಪ್ ತೆರೆದ ನಂತರ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಪಾಸ್ವರ್ಡ್ ಬಳಸಿ ಲಾಗಿನ್ ಆಗಬೇಕು. ಒಂದು ವೇಳೆ ನೀವು ಈ ಪೋರ್ಟಲ್ಗೆ ಹೊಸ ಬಳಕೆದಾರರಾಗಿದ್ದರೆ, ‘ಸೈನ್ ಅಪ್’ (Sign Up) ಆಯ್ಕೆಯ ಮೂಲಕ ಮೊಬೈಲ್ ಸಂಖ್ಯೆ ನೀಡಿ ಹೊಸ ಖಾತೆಯನ್ನು ರಚಿಸಿಕೊಂಡು, ನಂತರ ಲಾಗಿನ್ ಆಗಬಹುದು.
2. ಆನ್ಲೈನ್ ಸಲ್ಲಿಕೆ ಪ್ರಕ್ರಿಯೆ ಮತ್ತು ಒಟಿಪಿ (OTP) ದೃಢೀಕರಣ ಲಾಗಿನ್ ಪ್ರಕ್ರಿಯೆ ಯಶಸ್ವಿಯಾದ ನಂತರ ನಮೂನೆ ಭರ್ತಿ ಮಾಡುವ ಪ್ರಕ್ರಿಯೆ ಆರಂಭವಾಗುತ್ತದೆ. ಇದು ಅತ್ಯಂತ ಸುಲಭದ ಹಂತವಾಗಿದೆ:
ಹಂತ 1: ಲಾಗಿನ್ ಆದ ಬಳಿಕ ಮುಖಪುಟದಲ್ಲಿ (Dashboard) ಕಾಣುವ “ಗಣತಿ ನಮೂನೆಯನ್ನು ಭರ್ತಿ ಮಾಡಿ” (Fill Census Form) ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ 2: ನಂತರ, ಡ್ರಾಪ್ಡೌನ್ ಮೆನುವಿನಿಂದ ನಿಮ್ಮ ರಾಜ್ಯವನ್ನು (ಉದಾಹರಣೆಗೆ: ಕರ್ನಾಟಕ) ಆಯ್ಕೆ ಮಾಡಿ ಮತ್ತು ನಿಮ್ಮ ಎಪಿಕ್ ನಂಬರ್ ಅಂದರೆ ನಿಮ್ಮ ಹಳೆಯ ವೋಟರ್ ಐಡಿ ಸಂಖ್ಯೆಯನ್ನು (EPIC Number) ನಮೂದಿಸಿ ಸರ್ಚ್ ಮಾಡಿ.
ಆನ್ಲೈನ್ ಪ್ರಕ್ರಿಯೆ ಮುಗಿದ ತಕ್ಷಣ ನಿಮ್ಮ ಕೆಲಸ ಪೂರ್ಣಗೊಳ್ಳುವುದಿಲ್ಲ. ಮುಂದಿನ ಕ್ಷೇತ್ರ ಮಟ್ಟದ ಪರಿಶೀಲನೆಗೆ ಇದು ನಾಂದಿಯಾಗುತ್ತದೆ.