AIIMS Nursing Officer Recruitment 2026: ಕೇಂದ್ರ ಸರ್ಕಾರದ ಅಧೀನದಲ್ಲಿರುವ ಎಮ್ಸ್ (AIIMS) ಸೇರಿದಂತೆ ಹಲವು ರಾಷ್ಟ್ರೀಯ ವೈದ್ಯಕೀಯ ಸಂಸ್ಥೆಗಳಲ್ಲಿ 2,218 ನರ್ಸಿಂಗ್ ಆಫೀಸರ್ (Nursing Officer) ಹುದ್ದೆಗಳ ಭರ್ತಿಗೆ NORCET-2026 ಅಧಿಸೂಚನೆ ಬಿಡುಗಡೆಯಾಗಿದೆ. ಬಿ.ಎಸ್ಸಿ ನರ್ಸಿಂಗ್ ಅಥವಾ ಜಿಎನ್ಎಮ್ (GNM) ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಆಗಸ್ಟ್ 13, 2026 ಸಂಜೆ 5 ಗಂಟೆಯವರೆಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಆಯ್ಕೆ ಪ್ರಕ್ರಿಯೆಯು ಪ್ರಿಲಿಮ್ಸ್ ಮತ್ತು ಮೇನ್ಸ್ ಪರೀಕ್ಷೆಗಳ ಮೂಲಕ ನಡೆಯಲಿದೆ.
ಪ್ರಮುಖ ವಿವರಗಳು
ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಬಿ.ಎಸ್ಸಿ ನರ್ಸಿಂಗ್ ಹಾಗೂ ಜಿಎನ್ಎಮ್ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ಬೃಹತ್ ಉದ್ಯೋಗಾವಕಾಶವನ್ನು ತಂದಿದೆ. ದೇಶಾದ್ಯಂತ ಇರುವ ವಿವಿಧ ರಾಷ್ಟ್ರೀಯ ವೈದ್ಯಕೀಯ ಸಂಸ್ಥೆಗಳಲ್ಲಿ 2,218 ನರ್ಸಿಂಗ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಈ ನೇಮಕಾತಿಯನ್ನು ‘ನರ್ಸಿಂಗ್ ಆಫೀಸರ್ ರಿಕ್ರೂಟ್ಮೆಂಟ್ ಕಾಮನ್ ಎಲಿಜಿಬಿಲಿಟಿ ಟೆಸ್ಟ್’ (NORCET) ಮೂಲಕ ನಡೆಸಲಾಗುತ್ತದೆ. ಉದ್ಯೋಗಕ್ಕೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ ₹44,900 ರಂಭಿಕ ಮೂಲ ವೇತನ ಸಿಗಲಿದೆ. ಡಿಎ (DA), ಹೆಚ್ಆರ್ಎ (HRA) ಮುಂತಾದ ಭತ್ಯೆಗಳು ಸೇರಿ ಮೊದಲ ತಿಂಗಳಿನಿಂದಲೇ ಸುಮಾರು ₹85,000 ಕ್ಕೂ ಹೆಚ್ಚು ವೇತನ ಸಿಗುವ ಸಾಧ್ಯತೆಯಿದೆ.
ಪ್ರಮುಖ ಅಂಶ: ಈ ನೇಮಕಾತಿಯಲ್ಲಿ ಸುಮಾರು 80% ಹುದ್ದೆಗಳನ್ನು ಮಹಿಳೆಯರಿಗೆ ಮತ್ತು 20% ಹುದ್ದೆಗಳನ್ನು ಪುರುಷರಿಗೆ ಮೀಸಲಿಡಲಾಗುತ್ತದೆ. ಬಿ.ಎಸ್ಸಿ ನರ್ಸಿಂಗ್ ಅಥವಾ ಜಿಎನ್ಎಮ್ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಇದು ಉತ್ತಮ ವೃತ್ತಿಜೀವನದ ಅವಕಾಶವಾಗಿದೆ.
ಅರ್ಹತೆ ಮತ್ತು ವಯೋಮಿತಿ
- ಶೈಕ್ಷಣಿಕ ಅರ್ಹತೆ: ಬಿ.ಎಸ್ಸಿ ನರ್ಸಿಂಗ್ (B.Sc Nursing) / ಪೋಸ್ಟ್ ಬೇಸಿಕ್ ಬಿ.ಎಸ್ಸಿ ನರ್ಸಿಂಗ್ ಅಥವಾ ಜಿಎನ್ಎಮ್ (GNM – General Nursing & Midwifery) ಮುಗಿಸಿರಬೇಕು. ಜಿಎನ್ಎಮ್ ಅಭ್ಯರ್ಥಿಗಳು ಕನಿಷ್ಠ 50 ಹಾಸಿಗೆಗಳ ಆಸ್ಪತ್ರೆಯಲ್ಲಿ 2 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು.
- ವಯೋಮಿತಿ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ವೇಳೆಗೆ ಅಭ್ಯರ್ಥಿಗಳ ವಯಸ್ಸು 18 ರಿಂದ 30 ವರ್ಷಗಳ ನಡುವೆ ಇರಬೇಕು.
- ವಯೋಸಡಲಿಕೆ: SC/ST ಅಭ್ಯರ್ಥಿಗಳಿಗೆ 5 ವರ್ಷಗಳು, OBC ಅಭ್ಯರ್ಥಿಗಳಿಗೆ 3 ವರ್ಷಗಳು ಮತ್ತು ವಿಕಲಚೇತನ (PwBD) ಅಭ್ಯರ್ಥಿಗಳಿಗೆ ವರ್ಗದ ಆಧಾರದ ಮೇಲೆ 10 ರಿಂದ 15 ವರ್ಷಗಳವರೆಗೆ ವಯೋಸಡಲಿಕೆ ಇರುತ್ತದೆ.
ಅರ್ಜಿ ಶುಲ್ಕ (Application Fee)
- ಸಾಮಾನ್ಯ (General) ಮತ್ತು OBC ಅಭ್ಯರ್ಥಿಗಳಿಗೆ: ₹3,000
- SC, ST ಮತ್ತು EWS ಅಭ್ಯರ್ಥಿಗಳಿಗೆ: ₹2,400
- ವಿಕಲಚೇತನ (PwD) ಅಭ್ಯರ್ಥಿಗಳಿಗೆ: ಯಾವುದೇ ಶುಲ್ಕವಿಲ್ಲ (ಉಚಿತ)
ಆಯ್ಕೆ ಪ್ರಕ್ರಿಯೆ ಹೇಗೆ?
ಅಭ್ಯರ್ಥಿಗಳ ಆಯ್ಕೆಯನ್ನು ಎರಡು ಹಂತಗಳ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳ (CBT) ಮೂಲಕ ನಡೆಸಲಾಗುತ್ತದೆ:
- ಹಂತ-1: ಪ್ರಿಲಿಮಿನರಿ ಪರೀಕ್ಷೆ (Preliminary Exam):
- ಒಟ್ಟು 100 ಪ್ರಶ್ನೆಗಳು (100 ಅಂಕಗಳು) ಇರುತ್ತವೆ.
- ಇದರಲ್ಲಿ ನರ್ಸಿಂಗ್ ವಿಷಯಕ್ಕೆ ಸಂಬಂಧಿಸಿದ 80 ಪ್ರಶ್ನೆಗಳು ಹಾಗೂ ಜನರಲ್ ನಾಲೆಡ್ಜ್ ಮತ್ತು ಆಪ್ಟಿಟ್ಯೂಡ್ಗೆ ಸಂಬಂಧಿಸಿದ 20 ಪ್ರಶ್ನೆಗಳಿರುತ್ತವೆ.
- ಪರೀಕ್ಷೆಯ ಅವಧಿ 90 ನಿಮಿಷಗಳು.
- ಪ್ರತಿ ಸರಿಯಾದ ಉತ್ತರಕ್ಕೆ 1 ಅಂಕ ಹಾಗೂ ಪ್ರತಿ ತಪ್ಪು ಉತ್ತರಕ್ಕೆ 1/3 ಅಂಕಗಳ ನೆಗೆಟಿವ್ ಮಾರ್ಕಿಂಗ್ ಇರುತ್ತದೆ.
- ಗಮನಿಸಿ: ಈ ಪರೀಕ್ಷೆಯು ಕೇವಲ ಮುಂದಿನ ಹಂತಕ್ಕೆ ಅರ್ಹತೆ ಪಡೆಯಲು (Qualifying) ಮಾತ್ರ. ಅಂತಿಮ ಮೆರಿಟ್ ಪಟ್ಟಿಯಲ್ಲಿ ಈ ಅಂಕಗಳನ್ನು ಪರಿಗಣಿಸುವುದಿಲ್ಲ.
- ಹಂತ-2: ಮೇನ್ಸ್ ಪರೀಕ್ಷೆ (Mains Exam):
- ಪ್ರಿಲಿಮ್ಸ್ನಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಮಾತ್ರ ಇದನ್ನು ನಡೆಸಲಾಗುತ್ತದೆ.
- ಒಟ್ಟು 160 ಪ್ರಶ್ನೆಗಳು (160 ಅಂಕಗಳು) ಇರುತ್ತವೆ.
- ಪರೀಕ್ಷೆಯ ಅವಧಿ 3 ಗಂಟೆಗಳು.
- ಇಲ್ಲಿಯೂ ಪ್ರತಿ ಸರಿಯಾದ ಉತ್ತರಕ್ಕೆ 1 ಅಂಕ ಮತ್ತು ತಪ್ಪು ಉತ್ತರಕ್ಕೆ 1/3 ಅಂಕಗಳ ನೆಗೆಟಿವ್ ಮಾರ್ಕಿಂಗ್ ಇರುತ್ತದೆ.
- ಮೇನ್ಸ್ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು, ಮೀಸಲಾತಿ ನಿಯಮಗಳು ಮತ್ತು ದಾಖಲೆಗಳ ಪರಿಶೀಲನೆ (Document Verification) ಆಧಾರದ ಮೇಲೆ ಅಂತಿಮ ಆಯ್ಕೆ ನಡೆಯಲಿದೆ.
ಪ್ರಮುಖ ದಿನಾಂಕಗಳು
- ಆನ್ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 13 ಆಗಸ್ಟ್ 2026 (ಸಂಜೆ 5:00 ಗಂಟೆಯವರೆಗೆ)
- ಪ್ರಿಲಿಮ್ಸ್ (ಹಂತ-1) ಪರೀಕ್ಷಾ ದಿನಾಂಕ: 12 ಸೆಪ್ಟೆಂಬರ್ 2026
- ಮೇನ್ಸ್ (ಹಂತ-2) ಪರೀಕ್ಷಾ ದಿನಾಂಕ: 30 ಸೆಪ್ಟೆಂಬರ್ 2026
ಅರ್ಜಿ ಸಲ್ಲಿಸಲು: ಎಮ್ಸ್ ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ: aiimsexams.ac.in