Ganga Kalyana Yojane: ಬೋರ್‌ವೆಲ್ ಕೊರೆಸಲು ಸರ್ಕಾರದಿಂದಲೇ 4 ಲಕ್ಷ ಸಹಾಯಧನ! ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಶುರು

ganga kalyana yojane online application 2026: ಜಮೀನಿಗೆ ನೀರಿಲ್ಲ ಅಂತ ಚಿಂತೆಯಲ್ಲಿದ್ದೀರಾ? ಹಾಗಿದ್ರೆ ನಿಮಗೊಂದು ಸಿಹಿಸುದ್ದಿ. ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ಕೊಳವೆಬಾವಿ ಕೊರೆಸಲು ಸರ್ಕಾರ ಭಾರಿ ಮೊತ್ತದ ಸಹಾಯಧನ ನೀಡುತ್ತಿದ್ದು, ಇದಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಗಂಗಾ ಕಲ್ಯಾಣ ಯೋಜನೆ ಯಾರಿಗೆ ಸಿಗುತ್ತೆ ಈ ಸೌಲಭ್ಯ?

1.20 ಎಕರೆಯಿಂದ 5 ಎಕರೆವರೆಗೆ ಜಮೀನು ಇರುವ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಈ ಯೋಜನೆ ಅನ್ವಯವಾಗುತ್ತದೆ. ಬೋರ್‌ವೆಲ್ ಜೊತೆಗೆ ವಿದ್ಯುತ್ ಸಂಪರ್ಕವನ್ನೂ ಕಲ್ಪಿಸಿ ನೀರಾವರಿ ವ್ಯವಸ್ಥೆ ಮಾಡಿಕೊಡಲಾಗುತ್ತದೆ.

ಎಷ್ಟು ಸಹಾಯಧನ ಸಿಗುತ್ತೆ?

  • ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ತುಮಕೂರು ಜಿಲ್ಲೆಗಳ ರೈತರಿಗೆ ಗರಿಷ್ಠ ₹4.75 ಲಕ್ಷ.
  • ರಾಜ್ಯದ ಉಳಿದ ಎಲ್ಲಾ ಜಿಲ್ಲೆಗಳ ರೈತರಿಗೆ ಗರಿಷ್ಠ ₹3.75 ಲಕ್ಷ.
  • ಈ ಮೊತ್ತದಲ್ಲಿ ₹50 ಸಾವಿರ ಸಾಲದ ರೂಪದಲ್ಲಿರುತ್ತದೆ.

ಅರ್ಜಿ ಕರೆದಿರುವ ನಿಗಮಗಳು

ಈ ಕೆಳಗಿನ ನಿಗಮಗಳ ಮೂಲಕ ಅರ್ಜಿ ಸಲ್ಲಿಸಬಹುದು:

  • ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ
  • ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ
  • ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ
  • ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ
  • ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ

ಬೇರೆ ಯಾವ ಯೋಜನೆಗಳಿಗೂ ಅವಕಾಶ ಇದೆ?

ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ಗಂಗಾ ಕಲ್ಯಾಣದ ಜೊತೆಗೆ ಈ ಯೋಜನೆಗಳಿಗೂ ಅರ್ಜಿ ಸಲ್ಲಿಸಬಹುದು:

  • ಭೂ ಒಡೆತನ ಯೋಜನೆ
  • ಉದ್ಯಮಶೀಲತಾ ಅಭಿವೃದ್ಧಿ ಯೋಜನೆ (ಬ್ಯಾಂಕ್ ಸಹಯೋಗದೊಂದಿಗೆ)
  • ಮೈಕ್ರೋ ಕ್ರೆಡಿಟ್ (ಪ್ರೇರಣಾ) ಯೋಜನೆ

ಹೈನುಗಾರಿಕೆ ಮಾಡುವವರಿಗೂ ಗುಡ್ ನ್ಯೂಸ್

ಎರಡು ಹಸು ಅಥವಾ ಎರಡು ಎಮ್ಮೆ ಸಾಕಲು ಯೋಚಿಸುತ್ತಿದ್ದರೆ, ಘಟಕ ವೆಚ್ಚದ ಶೇ.50 ರಷ್ಟು ಅಥವಾ ಗರಿಷ್ಠ ₹1.25 ಲಕ್ಷದವರೆಗೆ ಸಹಾಯಧನ ಸಿಗುತ್ತದೆ. ಅಷ್ಟೇ ಅಲ್ಲ, ಹಸು/ಎಮ್ಮೆ ಖರೀದಿಗೆ ಪಡೆದ ಸಾಲಕ್ಕೆ ಬಡ್ಡಿ ಸಬ್ಸಿಡಿ ಹಾಗೂ ಜಾನುವಾರುಗಳಿಗೆ ವಿಮಾ ರಕ್ಷಣೆಯೂ ಲಭ್ಯವಿದೆ.

ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು

  • ಅರ್ಜಿದಾರರು ಪರಿಶಿಷ್ಟ ಜಾತಿಯ ಮಾದಿಗ ಹಾಗೂ ಸಂಬಂಧಿತ ಜಾತಿಗಳಿಗೆ ಸೇರಿದವರಾಗಿರಬೇಕು.
  • ಜಾತಿ ಪ್ರಮಾಣ ಪತ್ರದಲ್ಲಿ ಆದಿ ಕರ್ನಾಟಕ, ಆದಿ ಆಂಧ್ರ ಅಥವಾ ಆದಿ ದ್ರಾವಿಡ ಎಂದು ಇದ್ದರೆ, ಮೂಲ ಜಾತಿಯನ್ನು ಉಲ್ಲೇಖಿಸಿದ ಸ್ವಯಂ ಘೋಷಣಾ ಪತ್ರ ಕಡ್ಡಾಯವಾಗಿ ಸಲ್ಲಿಸಬೇಕು.
  • ಕರ್ನಾಟಕದ ನಿವಾಸಿಯಾಗಿರಬೇಕು.

ಬೇಕಾಗುವ ದಾಖಲೆಗಳು

  • ಭಾವಚಿತ್ರ
  • ಜಾತಿ ಪ್ರಮಾಣ ಪತ್ರ (ಆರ್.ಡಿ. ಸಂಖ್ಯೆ ಇರಬೇಕು)
  • ಆದಾಯ ಪ್ರಮಾಣ ಪತ್ರ (ಆರ್.ಡಿ. ಸಂಖ್ಯೆ ಇರಬೇಕು)
  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್‌ಬುಕ್

ಅರ್ಜಿ ಎಲ್ಲಿ, ಹೇಗೆ ಸಲ್ಲಿಸಬೇಕು?

ಸೇವಾ ಸಿಂಧು ಪೋರ್ಟಲ್ ಮೂಲಕ ನೀವೇ ಆನ್‌ಲೈನ್‌ನಲ್ಲಿ ಅರ್ಜಿ ಹಾಕಬಹುದು: https://sevaone.karnataka.gov.in/services. ಇಲ್ಲವಾದರೆ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಕ್ಕೆ ಹೋಗಿಯೂ ಅರ್ಜಿ ಸಲ್ಲಿಸಬಹುದು.

ಕೊನೆಯ ದಿನಾಂಕ: ನವೆಂಬರ್ 30

ಗಮನಿಸಿ: 2023-24, 2024-25 ಅಥವಾ 2025-26ನೇ ಸಾಲಿನಲ್ಲಿ ಆನ್‌ಲೈನ್‌ನಲ್ಲಿ ಈಗಾಗಲೇ ಅರ್ಜಿ ಹಾಕಿರುವವರು ಮತ್ತೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.

ಹೆಚ್ಚಿನ ಮಾಹಿತಿಗೆ

ನಿಮ್ಮ ಜಿಲ್ಲೆಯ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ನಿಗಮಗಳ ವೆಬ್‌ಸೈಟ್ ಅಥವಾ ಕಲ್ಯಾಣಮಿತ್ರ ಏಕೀಕೃತ ಎಸ್.ಸಿ/ಎಸ್.ಟಿ ಸಹಾಯವಾಣಿ 9482300400 ಗೆ ಸಂಪರ್ಕಿಸಿ.

Thippu Daasa
Verified
Digital Content Creator & Blogger

I am to Provide Reliable, Accurate and useful information on government schemes, job notifications, education news, scholarships and latest updates based on official sources.

1 thought on “Ganga Kalyana Yojane: ಬೋರ್‌ವೆಲ್ ಕೊರೆಸಲು ಸರ್ಕಾರದಿಂದಲೇ 4 ಲಕ್ಷ ಸಹಾಯಧನ! ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಶುರು”

Comments are closed.