ಹಂತ 1 – ಅಧಿಕೃತ ಪುಟಕ್ಕೆ ಭೇಟಿ ಮೊದಲಿಗೆ ‘ಈಗಲೇ ಅರ್ಜಿ ಸಲ್ಲಿಸಿ’ ಎಂಬ ಬಟನ್ ಒತ್ತಿ ಅಧಿಕೃತ buddy4study ಅರ್ಜಿ ಪುಟಕ್ಕೆ ತಲುಪಿ.
ಹಂತ 2 – ಲಾಗಿನ್ ಅಥವಾ ಹೊಸ ನೋಂದಣಿ ಈಗಾಗಲೇ ಬಡ್ಡಿ4ಸ್ಟಡಿಯಲ್ಲಿ ಖಾತೆ ಇದ್ದವರು ತಮ್ಮ ಐಡಿ ಬಳಸಿ ಲಾಗಿನ್ ಆಗಬಹುದು. ಹೊಸಬರಾಗಿದ್ದರೆ ಇಮೇಲ್, ಮೊಬೈಲ್ ನಂಬರ್ ಅಥವಾ ಗೂಗಲ್ ಖಾತೆ ಬಳಸಿ ಸುಲಭವಾಗಿ ನೋಂದಣಿ ಮಾಡಿಕೊಳ್ಳಬಹುದು.
ಹಂತ 3 – ಅರ್ಜಿ ನಮೂನೆ ಪುಟಕ್ಕೆ ಮರುನಿರ್ದೇಶನ ಲಾಗಿನ್ ಆದ ನಂತರ, ನಿಮ್ಮನ್ನು ಸ್ವಯಂಚಾಲಿತವಾಗಿ “ಡಾ. ರಾಜೇಂದ್ರ ಪ್ರಸಾದ್ ವಿದ್ಯಾರ್ಥಿವೇತನ 2026-27” ಎಂಬ ಅರ್ಜಿ ನಮೂನೆ ಪುಟಕ್ಕೆ ಕರೆದೊಯ್ಯಲಾಗುತ್ತದೆ.
ಹಂತ 4 – ಅರ್ಜಿ ಪ್ರಾರಂಭಿಸಿ ‘ಅರ್ಜಿಯನ್ನು ಪ್ರಾರಂಭಿಸಿ’ ಬಟನ್ ಒತ್ತುವ ಮೂಲಕ ನಿಜವಾದ ಅರ್ಜಿ ಪ್ರಕ್ರಿಯೆ ಶುರುವಾಗುತ್ತದೆ.
ಹಂತ 5 – ವೈಯಕ್ತಿಕ ಮತ್ತು ಶೈಕ್ಷಣಿಕ ವಿವರ ಭರ್ತಿ ಹೆಸರು, ಜನ್ಮ ದಿನಾಂಕ, ವಿಳಾಸ, ಶಾಲೆ/ಕಾಲೇಜಿನ ಹೆಸರು, ಪಡೆದ ಅಂಕಗಳು, ಪೋಷಕರ ಆದಾಯ ಮುಂತಾದ ಎಲ್ಲಾ ವಿವರಗಳನ್ನು ಅಂಕಪಟ್ಟಿ ಮತ್ತು ಇತರ ದಾಖಲೆಗಳಲ್ಲಿ ಇರುವಂತೆಯೇ, ಎಚ್ಚರಿಕೆಯಿಂದ ನಮೂದಿಸಿ.
ಹಂತ 6 – ದಾಖಲೆಗಳ ಅಪ್‌ಲೋಡ್ ಮೇಲೆ ತಿಳಿಸಿದ ಎಲ್ಲಾ ದಾಖಲೆಗಳನ್ನು ನಿಗದಿತ ಫಾರ್ಮ್ಯಾಟ್ ಮತ್ತು ಗಾತ್ರದಲ್ಲಿ ಅಪ್‌ಲೋಡ್ ಮಾಡಿ.
Apply Link - https://www.buddy4study.com/page/dr-rajendra-prasad-scholarship-program