Scholarship- ಪಿಯುಸಿಯಿಂದ ಪದವಿವರೆಗಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ!

ಉನ್ನತ ಶಿಕ್ಷಣ ಓದಬೇಕು ಅನ್ನೋ ಕನಸಿರುವ ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಂದು ಒಳ್ಳೆಯ ಅವಕಾಶ. ಕೃಷಿಕ್ ಸರ್ವೋದಯ ಫೌಂಡೇಶನ್ 2026-27ನೇ ಸಾಲಿನ ಕೃಷಿಕ್ ಎಂಡೋಮೆಂಟ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಿದೆ. ಪಿಯುಸಿ ಮುಗಿಸಿ ಪದವಿ, ವೃತ್ತಿಪರ ಪದವಿ ಅಥವಾ ಸ್ನಾತಕೋತ್ತರ ಪದವಿ ಓದುತ್ತಿರುವವರು ಅರ್ಜಿ ಹಾಕಬಹುದು.

ಇದು ಎಲ್ಲರಿಗೂ ಅಲ್ಲ. ಆರ್ಥಿಕವಾಗಿ ಹಿಂದುಳಿದ ಸಣ್ಣ ಮತ್ತು ಅತಿ ಸಣ್ಣ ರೈತರ ಮಕ್ಕಳಿಗೆ ಮಾತ್ರ.

Scholarship ಒಂದು ನೋಟದಲ್ಲಿ

ವಿವರಮಾಹಿತಿ
ವಿದ್ಯಾರ್ಥಿವೇತನಕೃಷಿಕ್ ಎಂಡೋಮೆಂಟ್ ವಿದ್ಯಾರ್ಥಿವೇತನ 2026-27
ಸಂಸ್ಥೆಕೃಷಿಕ್ ಸರ್ವೋದಯ ಫೌಂಡೇಶನ್, ಬೆಂಗಳೂರು
ಯಾರಿಗೆಸಣ್ಣ ಮತ್ತು ಅತಿ ಸಣ್ಣ ರೈತರ ಮಕ್ಕಳು
ಅರ್ಜಿ ವಿಧಾನಫಾರ್ಮ್ ಡೌನ್‌ಲೋಡ್ ಮಾಡಿ ಅಂಚೆ ಮೂಲಕ ಕಳುಹಿಸುವುದು
ಅಧಿಕೃತ ವೆಬ್‌ಸೈಟ್https://ksfkarnataka.com/

ಯಾರು ಅರ್ಜಿ ಹಾಕಬಹುದು?

ಶೈಕ್ಷಣಿಕ ಅರ್ಹತೆ:

  • ಪಿಯುಸಿಯಲ್ಲಿ ಉತ್ತೀರ್ಣರಾಗಿರಬೇಕು.
  • ಪದವಿ, ವೃತ್ತಿಪರ ಸ್ನಾತಕ ಪದವಿ ಅಥವಾ ಸ್ನಾತಕೋತ್ತರ ಪದವಿ ಓದುತ್ತಿರಬೇಕು.
  • ಸಂಬಂಧಿತ ಪರೀಕ್ಷೆಯಲ್ಲಿ 90%ಕ್ಕಿಂತ ಹೆಚ್ಚು ಅಂಕ ಅಥವಾ 10ರಲ್ಲಿ 9 ಸಿಜಿಪಿಎ ಗ್ರೇಡ್ ಇರಬೇಕು.
  • ಮುಂದಿನ ವ್ಯಾಸಂಗ ಮುಂದುವರಿಸುವ ಆಸಕ್ತಿ ಇರಬೇಕು.

ಇತರೆ ಷರತ್ತುಗಳು:

  • ಒಂದು ಹೆಕ್ಟೇರ್‌ಗಿಂತ ಕಡಿಮೆ ಒಣಭೂಮಿ ಅಥವಾ ನೀರಾವರಿ ಭೂಮಿ ಇರುವ ಸಣ್ಣ ಅಥವಾ ಅತಿ ಸಣ್ಣ ರೈತರ ಮಕ್ಕಳಾಗಿರಬೇಕು.
  • 10ನೇ ತರಗತಿಯವರೆಗೆ ಗ್ರಾಮೀಣ ಪ್ರದೇಶದ ಶಾಲೆಯಲ್ಲಿ ಓದಿರಬೇಕು.

ಅರ್ಜಿ ಹಾಕುವ ವಿಧಾನ

ಈ ವಿದ್ಯಾರ್ಥಿವೇತನಕ್ಕೆ ಆನ್‌ಲೈನ್ ಅರ್ಜಿ ಇಲ್ಲ. ಫಾರ್ಮ್ ಡೌನ್‌ಲೋಡ್ ಮಾಡಿ ಅಂಚೆಯಲ್ಲಿ ಕಳುಹಿಸಬೇಕು.

  1. ಫೌಂಡೇಶನ್‌ನ ಅಧಿಕೃತ ವೆಬ್‌ಸೈಟ್ ತೆರೆಯಿರಿ: https://ksfkarnataka.com/
  2. ಮೇಲ್ಭಾಗದ “Scholarship” ಬಟನ್ ಒತ್ತಿ.
  3. ಕೆಳಗೆ ಸ್ಕ್ರೋಲ್ ಮಾಡಿ “Download” ಬಟನ್ ಮೂಲಕ ಅರ್ಜಿ ನಮೂನೆ ಡೌನ್‌ಲೋಡ್ ಮಾಡಿಕೊಳ್ಳಿ.
  4. ಕೇಳಿರುವ ಎಲ್ಲಾ ವಿವರಗಳನ್ನು ಸರಿಯಾಗಿ ತುಂಬಿ, ಅಗತ್ಯ ದಾಖಲೆಗಳ ಪ್ರತಿ ಜೋಡಿಸಿ.
  5. ತುಂಬಿದ ಅರ್ಜಿಯನ್ನು ಫೌಂಡೇಶನ್‌ನ ಕೇಂದ್ರ ಕಚೇರಿಗೆ ಅಂಚೆ ಮೂಲಕ ಕಳುಹಿಸಿ.

ಅರ್ಜಿ ಕಳುಹಿಸುವ ವಿಳಾಸ

ಕೃಷಿಕ್ ಸರ್ವೋದಯ ಫೌಂಡೇಶನ್, ನಂ. 15, 2ನೇ ಮಹಡಿ, ಗಾಲ್ಫ್ ಅವೆನ್ಯೂ ರಸ್ತೆ, ಎಚ್.ಎ.ಎಲ್ ಹಳೆ ವಿಮಾನ ನಿಲ್ದಾಣ ರಸ್ತೆ, ಕೊಡಿಹಳ್ಳಿ, ಬೆಂಗಳೂರು-08.

ಬೇಕಾದ ದಾಖಲೆಗಳು

  • ವಿದ್ಯಾರ್ಥಿಯ ಆಧಾರ್ ಕಾರ್ಡ್
  • ಅಂಕಪಟ್ಟಿ
  • ಫೋಟೋ
  • ಬ್ಯಾಂಕ್ ಪಾಸ್‌ಬುಕ್
  • ಜಮೀನಿನ ಪಹಣಿ ಅಥವಾ ಹಿಡುವಳಿ ಪ್ರಮಾಣ ಪತ್ರ (RTC)

ಸಹಾಯವಾಣಿ

ಅರ್ಜಿ ವಿಧಾನ, ಅರ್ಹತೆ ಬಗ್ಗೆ ಹೆಚ್ಚಿನ ಮಾಹಿತಿಗೆ ಕರೆ ಮಾಡಿ: 080-25202299, 7625000990, 9901911410

Thippu Daasa
Verified
Digital Content Creator & Blogger

I am to Provide Reliable, Accurate and useful information on government schemes, job notifications, education news, scholarships and latest updates based on official sources.