ನಮಸ್ಕಾರ ಸ್ನೇಹಿತರೆ. ನಿಮ್ಮ ಮನೆಯಲ್ಲಿ ರೇಷನ್ ಕಾರ್ಡ್ ಇದೆಯಾ? ಅನ್ನಭಾಗ್ಯದ ಅಕ್ಕಿ ಅಥವಾ ದುಡ್ಡು, ಮತ್ತು ಗೃಹ ಲಕ್ಷ್ಮಿಯ ಹಣ ನಿಮಗೆ ಪ್ರತಿ ತಿಂಗಳು ಬರುತ್ತಿದಿಯ ? ಗೃಹ ಲಕ್ಷ್ಮಿಯ ಹಣ ನಿಮಗೆ ಪ್ರತಿ ತಿಂಗಳು ಬಂದ್ರು ಅಥವಾ ಬರದೇ ಇದ್ರು ಈ ವಿಡಿಯೋವನ್ನು ನೀವು ಒಂದು ಸೆಕೆಂಡ್ ಕೂಡ ಸ್ಕಿಪ್ ಮಾಡದೆ ಪೂರ್ತಿಯಾಗಿ ನೋಡಲೇಬೇಕು. ಯಾಕ್ ಗೊತ್ತಾ
ಸರ್ಕಾರದಿಂದ ಈಗ ರೇಷನ್ ಕಾರ್ಡ್ ಬಗ್ಗೆ ಒಂದು ಬಿಗ್ ಅಪ್‌ಡೇಟ್ ಬಂದಿದೆ. ನೀವು ಈ ಒಂದು ಕೆಲಸ ಮಾಡದಿದ್ದರೆ ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್ ಆಗಬಹುದು, ಜೊತೆಗೆ ಸರ್ಕಾರದ ಯಾವ ಯೋಜನೆಗಳೂ ನಿಮಗೆ ಸಿಗುವುದಿಲ್ಲ! ಏನದು ಹೊಸ ರೂಲ್ಸ್? ಬನ್ನಿ ನೋಡೋಣ.”
ಮೊದಲೆಲ್ಲಾ ರೇಷನ್ ಕಾರ್ಡ್‌ಗೆ ಮನೆಯ ಯಜಮಾನಿ ಅಥವಾ ಯಜಮಾನ ಮಾತ್ರ ಹೋಗಿ ಬೆರಳು ಕೊಟ್ಟು ಅಂದ್ರೆ ಬಯೋಮೆಟ್ರಿಕ್ ನಿಂದ ಕೆವೈಸಿ ಮಾಡಿದರೆ ಸಾಕಾಗಿತ್ತು. ಆದರೆ ಈಗ ಹಾಗಲ್ಲ! ಆಹಾರ ಇಲಾಖೆಯ ಹೊಸ ನಿಯಮದ ಪ್ರಕಾರ, ನಿಮ್ಮ ರೇಷನ್ ಕಾರ್ಡ್‌ನಲ್ಲಿ ಎಷ್ಟು ಜನರ ಹೆಸರು ಇದೆಯೋ, ಆ ಎಲ್ಲಾ ಸದಸ್ಯರೂ ಕಡ್ಡಾಯವಾಗಿ ಇ ಕೆವೈಸಿ ಮಾಡಿಸಲೇಬೇಕು. ಕಾರ್ಡ್‌ನಲ್ಲಿ 5 ಜನರಿದ್ದರೆ, ಐದೂ ಜನ ಹೋಗಿ ತಮ್ಮ ಆಧಾರ್ ಲಿಂಕ್ ಮಾಡಿಸಿ, ಬಯೋಮೆಟ್ರಿಕ್ ಕೊಡಬೇಕು. ಮೃತಪಟ್ಟವರ ಹೆಸರು ಮತ್ತು ನಕಲಿ ಕಾರ್ಡ್‌ಗಳನ್ನು ತೆಗೆದುಹಾಕಲು ಸರ್ಕಾರ ಈ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆ. ಅದ್ಕೆ ಕಡ್ಡಾಯವಾಗಿ ಇ ಕೆವೈಸಿ ಮಾಡಿಸಲೇಬೇಕು.
ಹಾಗಾದ್ರೆ ಇ ಕೆವೈಸಿ ಮಾಡಿಸೋಕೆ ಎಲ್ಲಿಗೆ ಹೋಗಬೇಕು? ಏನೇನು ದಾಖಲೆ ಬೇಕು?
ನೀವು ಇದಕ್ಕೆ ಎಲ್ಲೋ ದೂರ ಅಲೆಯಬೇಕಾದ ಅವಶ್ಯಕತೆ ಇಲ್ಲ. ನಿಮ್ಮ ಊರಿನ ಗ್ರಾಮ ಪಂಚಾಯಿತಿ ಕಚೇರಿ, ಬಾಪೂಜಿ ಸೇವಾ ಕೇಂದ್ರ, ಅಥವಾ ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿ ಹಾಗೆಯೇ CSC ಸೆಂಟರ್‌ಗಳಲ್ಲಿ ಇದನ್ನು ಉಚಿತವಾಗಿ ಇ ಕೆವೈಸಿ ಮಾಡಿಸಬಹುದು. ಹೋಗುವಾಗ ಮರೆಯದೆ ನಿಮ್ಮ ಒರಿಜಿನಲ್ ರೇಷನ್ ಕಾರ್ಡ್ ಮತ್ತು ಮನೆಯ ಎಲ್ಲಾ ಸದಸ್ಯರ ಆಧಾರ್ ಕಾರ್ಡ್‌ಗಳನ್ನು ತೆಗೆದುಕೊಂಡು ಹೋಗಿ. ಪ್ರತಿಯೊಬ್ಬರೂ ಅಲ್ಲಿ Fingerprint ನೀಡಬೇಕಾಗುತ್ತದೆ.”
Next ಇ ಕೆವೈಸಿ ಮಾಡಿಸದಿದ್ದರೆ ಏನಾಗುತ್ತದೆ?
ಒಂದು ವೇಳೆ ನೀವು ಇ-ಕೆವೈಸಿ ಮಾಡಿಸಲಿಲ್ಲ ಅಂದರೆ ಏನಾಗುತ್ತೆ? ಮೊದಲನೆಯದಾಗಿ, ಯಾರ ಹೆಸರು ಇ ಕೆವೈಸಿ ಆಗಿರುವುದಿಲ್ಲವೋ ಅವರ ಹೆಸರಿನಲ್ಲಿ ಸಿಗುವ ರೇಷನ್ ಕಟ್ ಆಗುತ್ತದೆ. ಎರಡನೆಯದಾಗಿ, ಅನ್ನಭಾಗ್ಯ ಯೋಜನೆಯಡಿ ಸಿಗುವ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬರುವುದು ನಿಂತುಹೋಗುತ್ತದೆ. ಮತ್ತು ಅತಿ ಮುಖ್ಯವಾಗಿ, ಇ-ಕೆವೈಸಿ ಪೆಂಡಿಂಗ್ ಇದ್ದರೆ ಗೃಹಲಕ್ಷ್ಮಿ ಯೋಜನೆಯ 2000 ರೂಪಾಯಿ ಕೂಡ ತಡೆಹಿಡಿಯುವ ಸಾಧ್ಯತೆ ಇದೆ. ಆದ್ದರಿಂದ ನಿರ್ಲಕ್ಷ್ಯ ಮಾಡಬೇಡಿ ಈವತ್ತೇ ಇ ಕೆವೈಸಿ ಮಾಡಿಸಿ.
ಹಾಗಾದ್ರೆ ಈಗ ಯಾವ ಜಿಲ್ಲೆಗಳಲ್ಲಿ ಇ ಕೆವೈಸಿ ಶುರುವಾಗಿದೆ ಅಂತ ನೋಡೋಣ ?
ಬಹಳಷ್ಟು ಜನರಿಗೆ ಒಂದು ದೊಡ್ಡ ಗೊಂದಲ ಇದೆ… ‘ನಮ್ಮ ಜಿಲ್ಲೆಯಲ್ಲಿ ಇನ್ನೂ ಇ-ಕೆವೈಸಿ ಶುರುವಾಗಿಲ್ಲವಾ?’ ಅಂತ. ಖಂಡಿತ ಹಾಗೇನಿಲ್ಲ! ಇದು ಕೇವಲ ಒಂದು ಅಥವಾ ಎರಡು ಜಿಲ್ಲೆಗಳಿಗೆ ಸೀಮಿತವಾಗಿಲ್ಲ. ಇಡೀ ಕರ್ನಾಟಕದ ಎಲ್ಲಾ 31 ಜಿಲ್ಲೆಗಳಲ್ಲೂ ಈ ಇ-ಕೆವೈಸಿ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ. ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡದಿಂದ ಹಿಡಿದು ಕಲ್ಯಾಣ ಕರ್ನಾಟಕದ ಬೀದರ್, ರಾಯಚೂರು, ಕಲಬುರಗಿಯವರೆಗೂ ಎಲ್ಲಾ ಹಳ್ಳಿಗಳಲ್ಲೂ ಇದು ಕಡ್ಡಾಯವಾಗಿದೆ. ಆದರೆ, ಕೆಲವು ಕಡೆ ಸರ್ವರ್ ಸಮಸ್ಯೆಯಿಂದಾಗಿ ಪ್ರಕ್ರಿಯೆ ಸ್ವಲ್ಪ ನಿಧಾನವಾಗಿ ನಡೆಯುತ್ತಿರಬಹುದು. ಹಾಗಾಗಿ, ನಿಮ್ಮ ಜಿಲ್ಲೆಯಲ್ಲಿ ಇನ್ನು ಶುರುವಾಗಿಲ್ಲ ಎಂದು ನೀವಾಗಿ ನೀವೇ ಸುಮ್ಮನೆ ಕೂರಬೇಡಿ, ನಿಮ್ಮ ಪಂಚಾಯಿತಿಗೆ ಹೋಗಿ ಒಮ್ಮೆ ವಿಚಾರಿಸಿ.
ಮತ್ತೊಂದು ಅತಿ ಮುಖ್ಯವಾದ ವಿಷಯ Very Important Point ಮನೆಯಲ್ಲಿರುವ ಎಲ್ಲರೂ ಹೋಗಬೇಕು ಎಂದ ತಕ್ಷಣ ಚಿಕ್ಕ ಮಕ್ಕಳನ್ನೂ ಕರೆದುಕೊಂಡು ಹೋಗಬೇಕಾ? ಎಂಬ ಪ್ರಶ್ನೆ ಬರುತ್ತದೆ. ಸರ್ಕಾರ ಸ್ಪಷ್ಟವಾಗಿ ಹೇಳಿದೆ- 5 ವರ್ಷದೊಳಗಿನ ಮಕ್ಕಳಿಗೆ ಇ-ಕೆವೈಸಿ ಮಾಡಿಸುವ ಅವಶ್ಯಕತೆ ಇಲ್ಲ. ಅವರ ಹೆಸರು ಕಾರ್ಡ್‌ನಲ್ಲಿದ್ದರೂ ಸದ್ಯಕ್ಕೆ ಅವರಿಗೆ ವಿನಾಯಿತಿ ಇದೆ. ಹಾಗೆಯೇ, ಮನೆಯಲ್ಲಿ ತುಂಬಾ ವಯಸ್ಸಾದವರು ಇದ್ದರೆ, Fingerprint ಮ್ಯಾಚ್ ಆಗುವುದಿಲ್ಲ, ಅಂತಹವರು ಏನು ಮಾಡಬೇಕು? ವಯಸ್ಸಾದ ಕಾರಣ ಬೆರಳಚ್ಚು ಬೀಳದಿದ್ದರೆ, ನಿಮ್ಮ ಹತ್ತಿರದ ಆಧಾರ್ ಸೆಂಟರ್‌ಗೆ ಹೋಗಿ ಐರಿಸ್ ಸ್ಕ್ಯಾನ್ ಮೂಲಕ ಆಧಾರ್ ಅಪ್‌ಡೇಟ್ ಮಾಡಿಸಿ, ಆಮೇಲೆ ರೇಷನ್ ಕೆವೈಸಿ ಮಾಡಿಸಬಹುದು.”
ಸ್ನೇಹಿತರೆ, ಸರ್ವರ್ ಪ್ರಾಬ್ಲಮ್ ಇರುವುದರಿಂದ ಕೆಲವೊಮ್ಮೆ ತಡವಾಗಬಹುದು, ಆದರೆ ಪಂಚಾಯಿತಿಗೆ ಭೇಟಿ ನೀಡಿ ಆದಷ್ಟು ಬೇಗ ಈ ಕೆಲಸ ಮುಗಿಸಿಕೊಳ್ಳಿ. ಈ ಮಾಹಿತಿ ಕರ್ನಾಟಕದ ಪ್ರತಿಯೊಬ್ಬರಿಗೂ ತಿಳಿಯಬೇಕು. ಹಾಗಾಗಿ ದಯವಿಟ್ಟು ಈ ವಿಡಿಯೋವನ್ನು ನಿಮ್ಮ ಕುಟುಂಬದವರಿಗೆ ಮತ್ತು ಊರಿನ ವಾಟ್ಸಾಪ್ ಗ್ರೂಪ್‌ಗಳಿಗೆ ಈಗಲೇ ಶೇರ್ ಮಾಡಿ. ರೇಷನ್ ಕಾರ್ಡ್ ಬಗ್ಗೆ ನಿಮಗೆ ಇನ್ನೂ ಏನಾದರೂ ಅನುಮಾನ ಇದ್ದರೆ ಕಮೆಂಟ್ ಮಾಡಿ, ನಾನು ಖಂಡಿತ ಉತ್ತರ ಕೊಡುತ್ತೇನೆ. ಇದೇ ತರ ಇಂತಹ ಉಪಯುಕ್ತ ಮಾಹಿತಿಗಾಗಿ ನಮ್ಮ ಚಾನೆಲ್ ಸಬ್‌ಸ್ಕ್ರೈಬ್ ಮಾಡಿ. ಧನ್ಯವಾದಗಳು.