BANK FD: ಬ್ಯಾಂಕ್ ನಲ್ಲಿ ನೀವು 2 ಲಕ್ಷ ರೂಪಾಯಿ ಠೇವಣಿ ಇಟ್ಟರೆ ಎಷ್ಟು ಬಡ್ಡಿ ಬರುತ್ತೆ ಗೊತ್ತಾ ? ಸಂಪೂರ್ಣ ಲೆಕ್ಕಾಚಾರ ಇಲ್ಲಿದೆ

BANK FD: ಬ್ಯಾಂಕ್ ಸ್ಥಿರ ಠೇವಣಿಗಳು ಅಂದರೆ ಫಿಕ್ಸ್ಡ್ ಡಿಪಾಸಿಟ್‌ಗಳು ಇಂದಿಗೂ ಸಾರ್ವಜನಿಕರಿಗೆ ಅತ್ಯಂತ ಸುರಕ್ಷಿತ ಹೂಡಿಕೆ ಮಾರ್ಗಗಳಾಗಿವೆ. ಇವುಗಳಲ್ಲಿ ಪೂರ್ವ ನಿರ್ಧಾರಿತ ಬಡ್ಡಿದರಗಳ ಪ್ರಕಾರ ಖಾತರಿಪಡಿಸಿದ ಆದಾಯ ದೊರೆಯುತ್ತದೆ. ಅಪಾಯವಿಲ್ಲದ ಹೂಡಿಕೆ ಬಯಸುವವರು ಮತ್ತು ವಿಶೇಷವಾಗಿ ಹಿರಿಯ ನಾಗರಿಕರು ತಮ್ಮ ಹಣದ ಸುರಕ್ಷತೆಗಾಗಿ ಬ್ಯಾಂಕ್ ಫಿಕ್ಸ್ಡ್ ಡಿಪಾಸಿಟ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ದೇಶದ ಅತಿ ದೊಡ್ಡ ಸಾರ್ವಜನಿಕ ರಂಗದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಅತಿ ದೊಡ್ಡ ಖಾಸಗಿ ರಂಗದ ಬ್ಯಾಂಕ್ ಆದ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ 5 ವರ್ಷಗಳ ಅವಧಿಗೆ 2 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಸಿಗುವ ಬಡ್ಡಿ ಮತ್ತು ಆದಾಯದ ಲೆಕ್ಕಾಚಾರವನ್ನು ಇಲ್ಲಿ ಪರಿಶೀಲಿಸಬಹುದು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಡ್ಡಿದರಗಳು ಮತ್ತು ಆದಾಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 5 ರಿಂದ 10 ವರ್ಷಗಳ ಅವಧಿಯ ಸ್ಥಿರ ಠೇವಣಿಗೆ ಸಾಮಾನ್ಯ ನಾಗರಿಕರಿಗೆ ಶೇಕಡಾ 6.05 ರಷ್ಟು ಬಡ್ಡಿದರ ನೀಡಲಾಗುತ್ತಿದೆ. ಇದರಲ್ಲಿ 2 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ 5 ವರ್ಷಗಳ ಅವಧಿಗೆ ಬಡ್ಡಿಯ ರೂಪದಲ್ಲಿ 70,035 ರೂಪಾಯಿ ಸಿಗುತ್ತದೆ.

ಇದೇ ಅವಧಿಗೆ ಹಿರಿಯ ನಾಗರಿಕರಿಗೆ ಶೇಕಡಾ 6.90 ರಷ್ಟು ಬಡ್ಡಿದರ ದೊರೆಯಲಿದ್ದು, 2 ಲಕ್ಷ ರೂಪಾಯಿ ಠೇವಣಿಗೆ ಮೆಚ್ಯೂರಿಟಿ ಅವಧಿಯಲ್ಲಿ ಬಡ್ಡಿಯಾಗಿ 83,652 ರೂಪಾಯಿ ಆದಾಯ ಲಭ್ಯವಾಗುತ್ತದೆ.

ಎಚ್‌ಡಿಎಫ್‌ಸಿ ಬ್ಯಾಂಕ್ ಬಡ್ಡಿದರಗಳು ಮತ್ತು ಆದಾಯ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಸಾಮಾನ್ಯ ನಾಗರಿಕರಿಗೆ ಎಸ್‌ಬಿಐಗಿಂತ ತುಸು ಹೆಚ್ಚಿನ ಬಡ್ಡಿದರ ಲಭ್ಯವಿದೆ. ಸಾಮಾನ್ಯ ನಾಗರಿಕರಿಗೆ ಶೇಕಡಾ 6.15 ರಷ್ಟು ಬಡ್ಡಿದರ ಇದ್ದು, 2 ಲಕ್ಷ ರೂಪಾಯಿ ಹೂಡಿಕೆಗೆ 5 ವರ್ಷಗಳಲ್ಲಿ 71,368 ರೂಪಾಯಿ ಬಡ್ಡಿ ಸಿಗುತ್ತದೆ.

ಆದರೆ ಹಿರಿಯ ನಾಗರಿಕರಿಗೆ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಬಡ್ಡಿದರ ಶೇಕಡಾ 6.65 ರಷ್ಟಿದ್ದು, 2 ಲಕ್ಷ ರೂಪಾಯಿ ಠೇವಣಿಗೆ 78,129 ರೂಪಾಯಿ ಬಡ್ಡಿ ಆದಾಯ ದೊರೆಯುತ್ತದೆ.

ಎರಡು ಬ್ಯಾಂಕ್‌ಗಳ ಹೋಲಿಕೆ ಸಾಮಾನ್ಯ ನಾಗರಿಕರಿಗೆ ಎಸ್‌ಬಿಐಗಿಂತ ಎಚ್‌ಡಿಎಫ್‌ಸಿ ಬ್ಯಾಂಕ್ ಸ್ವಲ್ಪ ಹೆಚ್ಚಿನ ಬಡ್ಡಿ ನೀಡುತ್ತದೆ. ಆದರೆ ಹಿರಿಯ ನಾಗರಿಕರಿಗೆ ಎಚ್‌ಡಿಎಫ್‌ಸಿ ಬ್ಯಾಂಕ್‌ಗಿಂತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿಯೇ ಹೆಚ್ಚಿನ ಬಡ್ಡಿದರ ಮತ್ತು ಅಧಿಕ ರಿಟರ್ನ್ಸ್ ಸಿಗುತ್ತದೆ.

Thippu Daasa
Verified
Digital Content Creator & Blogger

I am to Provide Reliable, Accurate and useful information on government schemes, job notifications, education news, scholarships and latest updates based on official sources.